Sunday 13 March 2011

ಬಾಳ ಚದುರಂಗ

ಬಾಳೊಂದು ಚದುರಂಗ ಪರಮಾತ್ಮನಾ ರಂಗ,
ನೀನಾಡೋ ಆಟ ನಿನದಲ್ಲ,
ತಂಬೂರಿ ನುಡಿದಾಗ ತಲೆದೂಗಿ ನಿಂದ್ಯಲ್ಲೋ,
ತಂಬೂರಿ ನುಡಿದಾತ ಅವನಲ್ಲ
ಸಿರಿ ಬಂದು ಸುಳಿದಾಗ ಮನದಣಿಯೆ ಮೆರೆದಲ್ಲೋ, 
ಸಿರಿಮರೆಯ ಅರಿವು ನಿನಗಿಲ್ಲ


ಜವರಾಯನುರುಳು  ನಿನ್ನವರ  ಸೆಳೆವಾಗ  
ಕಣ್ಣೀರಗೆರೆಯುವೆಯೇಕೆ?
ಬೆಳಕಿನಾಟದಿ ಮುಸ್ಸಂಜೆ  ಕವಿದಾಗ  
ದರೆಗುರುಳುವೆಯೇಕೆ?
ಹಿಗ್ಗದೆ ಜಗ್ಗದೆ ಮುನ್ನಡೆಯೇ ಜಯವು
ಇದುವೇ ಬಾಳಿನ ಮರ್ಮ ತಿಳಿಯೆಯೇಕೆ.

-ಶ್ರೀ


ಜೀವನ ತುಂಬ ಸುಂದರ ಸಂಗೀತವಿದ್ದಂತೆ. ವಿವಿಧ ಸ್ವರಗಳಿಂದ ಸಂಗೀತ ಚಂದಗೊಂಡಂತೆ, ವಿವಿಧ ಭಾವಗಳಿಂದ ಜೀವನ ಪೂರ್ಣಗೊಳ್ಳುತ್ತದೆ. ನನ್ನೊಂದಿಗಿರುವ ಹೇಳಿದ ಕೇಳಿದ ಅನುಭವಗಳ
 ಕಾವ್ಯ ರೂಪ ಕೊಡುವ ಪ್ರಯತ್ನ ನನ್ನದು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸಂಪೂರ್ಣ ಸ್ವಾಗತ.

4 comments: