Sunday 27 February 2011

ಹಿಂಡಿ ಹಿಂದಿನ ಕಥೆ

Hello, ನಮಸ್ಕಾರ, ಮಾತು ಶುರು ಮಾಡೋಕೆ ಮುಂಚೆ ನನ್ನ ಪರಿಚಯ ಮಾಡ್ಕೊಳ್ಳೋಣ ಬನ್ನಿ.
ನನ್ನ ಹೆಸರು ಗೌರಿ (ಹಸು), ನಾನು ಇರೋದು ಶಿವರಾಮ ಭಟ್ಟರ ಮನೆಯಲ್ಲಿ (ನೀವು ಅದನ್ನ ದನದ ಹಟ್ಟಿ, ಕೊಟ್ಟಿಗೆ ಅಂತಾ ಹೇಳ್ತಿರೆನೋ). ನಮ್ಮದು ಸ್ವಲ್ಪ ದೊಡ್ಡ ಕುಟುಂಬ. ಉಳಿದವರ ಪರಿಚಯ ಹೋಗ್ತಾ ಹೋಗ್ತಾ ಮಾಡ್ತಿನಿ.
    
         ನಮ್ಮ ಮನೆಗೆ (ಮತ್ತೆ confuse ಮಾಡ್ಕೋಬೇಡಿ ಗೌರಿ ಕೊಟ್ಟಿಗೆಗೆ/ಹಟ್ಟಿಗೆ ಮನೆ ಅಂತಾನೆ ಹೇಳೋದು) ಕೆಲಸಕ್ಕೆ  ಬರೋ ಹೆಂಗಸು (ಮನೆ ಒಡತಿ ) ಬಹಳ  ಒಳ್ಳೆಯವಳು. ದಿನಾ ಬೆಳಿಗ್ಗೆ ಮುಂಚೆ ಬಂದು ನಮ್ಮ ಮನೆ  clean ಮಾಡ್ತಾಳೆ, ವಾರಕ್ಕೊಮ್ಮೆ ನಮಗೆ ಸ್ನಾನ ಮಾಡಿಸ್ತಾಳೆ, ಎಲ್ಲಕ್ಕಿಂತ ವಿಶೇಷ ಅಂದ್ರೆ ನಂಗೆ ತಿನ್ನೋಕೆ breakfast, lunch, snacks ಎಲ್ಲ ಅವಳೇ ನೋಡ್ಕೊಳ್ಳೋದು. (ದನಗಳಿಗೆ dinner ಮಾಡೋ ಅಬ್ಯಾಸ ಇರಲ್ಲ)  ನನ್ನ ಕಂಡ್ರೆ ಅವಳಿಗೆ ಜಾಸ್ತಿ love , ಅದಕ್ಕೆ ಕಾರಣಾನೂ ಇಲ್ಲದೆ ಏನಿಲ್ಲ, ಇಲ್ಲಿ ಇರೋರಲ್ಲಿ ನಾನೆ ಎಲ್ಲರಿಗಿಂತ ಒಳ್ಳೆಯವಳು (ಎಷ್ಟು ಅನ್ನೋ ವಿಚಾರ ನಿಮಗೆ ಅರ್ಥ ಆಗತ್ತೆ), ಅವಳ ತೀವ್ರ ಬೆನ್ನು ನೋವು ನನ್ನ ಬಿಸಿ ಬಿಸಿ ಸೆಗಣಿಯಿಂದ ಮಂಗ ಮಾಯವಾಗಿತ್ತು (ನಿಜ ಏನಂದ್ರೆ ಹಾಲು ಕರೆಯಲು ಬಂದ ಮನೆಯಾಕೆಯ ಬೆನ್ನ ಮೇಲೆ ಸೆಗಣಿ ಹಾಕಿದ್ದಳು ಗೌರಿ,ತತ್ಫಲವಾಗಿ ಆಕೆಯ ಬೆನ್ನು ನೋವು ಕಡಿಮೆ ಆಗಿದ್ದು ಸತ್ಯ).
ಅವಳ ಮನೆಯಲ್ಲಿ ಏನೇ ಕಾರ್ಯಕ್ರಮ ಇದ್ರೂ ನಾನೇ ಗಂಜಲ ಕೊಡ್ತಾ ಇದ್ದಿದ್ದು.    
   
    ಮೊನ್ನೆ ಏನಾಯ್ತು ಗೊತ್ತಾ, ನಮ್ಮ regular ಕೆಲಸದಾಕೆ ಬಂದಿರಲಿಲ್ಲ, ಶಿವರಾಂ ಭಟ್ಟರೇ ತಿಂಡಿ(ಹಿಂಡಿ) ಕೊಟ್ಟು ಹಾಲು ಕರೆಯೋಕೆ ಬಂದಿದ್ದರು. ನಮ್ಮ ಭಟ್ಟರು ತುಂಬಾ ಒಳ್ಳೆಯವರು ಆದ್ರೆ ಸ್ವಲ್ಪ ಕಂಜೂಸ್. ನಾನು ಸೇಡು ತೀರಿಸಿಕೊಳ್ಳಲು ಕಾಯ್ತಾ ಇದ್ದೆ ಬಿಡೆ, ಆ ಸಮಯಾನು ಬಂದೆ ಬಿಡ್ತು. ಶಿವರಾಂ ಭಟ್ಟರು ನನ್ನ ಪಕ್ಕದ ವೈಶಾಲಿ (ಪಕ್ಕದ ಹಸು ) ಹಾಲು ಕರೆಯೋಕೆ ಬಂದಿದ್ದರು. ಭಟ್ಟರು ಹಾಲು ಕರೆಯೋದನ್ನೇ ಶುರು ಮಾಡೋದನ್ನೇ ಕಾಯ್ತಾ ಇದ್ದ ನಾನು ವೈಶಾಲಿ ಮಗಳಿಗೆ ಹಿಂದಿಂದ ಒಂದು ಪಿಂಚ್ ಕೊಟ್ಟೆ ನೋಡಿ, ha ha ha.... ವೈಶಾಲಿ ಭಟ್ಟರನ್ನ Football ಆಡಿ ಬಿಟ್ಟಳು.
 
          ಭಟ್ಟರಿಗೆ ಅದ್ಹೇಗೋ ನಾನ್ ಕಿರಿಕ್ ಮಾಡೋ ವಿಚಾರ ಗೊತ್ತಗಿಬಿಡ್ತು ಅನ್ನಿಸತ್ತೆ, ಅದಕ್ಕೆ ಆವಾಗ ಆವಾಗ ಹಿಂಡಿ ಕೊಡೋ ಸಮಯಕ್ಕೆ ಬಂದು ನನ್ನ ಪಾಲಿನ ಹಿಂಡಿಯನ್ನು 'ಜಲಜಾ' ಗೆ ಕೊಡ್ತಾ ಇದ್ರು (ಜಲಜ ಗೌರಿ ಸಾಲಿನ ಕೊನೆಯಲ್ಲಿ ಇರೋ ಎಮ್ಮೆ). ನಮ್ಮ ಜಲಜಾನೋ ಪಾಪ diet ಮಾಡ್ಬೇಕು ಅಂತಾ ಇದ್ಲು ಆದ್ರೆ ಭಟ್ರು ಬೇಡ ಅಂದರೂ ಹಿಂಡಿ ಕೊಟ್ಟು ಕೊಟ್ಟು ಅವಳ ಫಿಗರ್ ಹಾಳು ಮಾಡಿಬಿಟ್ಟರು. ಜಲಜಾನೂ ಅಷ್ಟೇ,  ಸುಮ್ನೆ ರಾತ್ರಿಯೆಲ್ಲ  "diet ಮಾಡ್ತೀನಿ, diet ಮಾಡ್ತೀನಿ" ಅಂತಾ ಹೇಳೋದು, ಬೆಳಿಗ್ಗೆ ಹಿಂಡಿ ನೋಡ್ತಾ ಇದ್ದ ಹಾಗೆ ಹಂದಿ ತಿಂದ ಹಾಗೆ ತಿಂತಾಳೆ. (ನಾವು ದನ ತಿಂದ ಹಾಗೆ ತಿಂತಾಳೆ  ಅಂತಾ ಕೂಡ ಅಂದ್ಕೋಬಹುದು).

        ಇತ್ತೀಚಿಗೆ ನಮ್ ಭಟ್ಟರು ಅದ್ಯಾವದೋ ಹೊಸ ಜಾತಿ ಹುಲ್ಲು ತಂದು ಬಿಟ್ಟರು, ನನಗೆ ಅನ್ಸತ್ತೆ, "ಆ ದಿನ ಆ ಹುಲ್ಲು ತಿಂದು ನಾನು ಮುಖ ಸಿಂಡರಿಸಿಕೊಂಡು ಹೋಗಿದ್ದು ನೋಡಿ ಬಿಟ್ಟಿದ್ದರು ಅದಕ್ಕೆ ನನ್ನ ಮೇಲೆ ಕೋಪ ತೀರಿಸಿಕೊಳ್ಳಲು ಹಿಂಗೆ ಮಾಡಿದ್ದರು.
ಈ ತರ ನನಗೆ ಕಡಿಮೆ ಹಿಂಡಿ ಕೊಟ್ಟು ಕೊಟ್ಟು ನಾನು full slim ಆಗಿ ಬಿಟ್ಟಿದ್ದೆ. ಜಲಜ ಈಗ ನನ್ನ ನೋಡಿ ಅಸೂಯೆ ಪಟ್ಟು ಊಟ ತಿಂಡಿ ಬಿಟ್ಟು ಬಿಟ್ಟಿದ್ದಳು. ಇದಾದ ಮೇಲೆ ಒಂದು ದಿನ ಹಾಲು ಕರೆಯುವಾಗ ನಮ್ಮ ಭಟ್ಟರ ಮೇಲೆ ನಾನು ಬಿದ್ದು ಬಿಟ್ಟಿದ್ದೆ, ಅದಾದ ಮೇಲೆ ನನಗೆ ಹಿಂಡಿ ಸ್ವಲ್ಪ ಜಾಸ್ತಿ ಸಿಗತೊಡಗಿತು.

-----------------------------------------------------------------------------------------------------

-ಶ್ರೀ


   ಹಸುಗಳ ಆಲೋಚನೆಗಳನ್ನು ಹಾಸ್ಯತ್ಮಕವಾಗಿ ನಿರೂಪಿಸುವ ಪ್ರಯತ್ನ ಮಾಡಿದ್ದೇನೆ. ನಿಮ್ಮ ಸದಭಿರುಚಿಯ ಪ್ರತಿಕ್ರಿಯೆಗಳಿಗೆ ಸ್ವಾಗತ.

13 comments:

  1. chennagide kanree kottige kathe...

    ReplyDelete
  2. ತುಂಬ ಚೆನ್ನಾಗಿದೆ ಹೆಗ್ಡೇರೆ

    ReplyDelete
  3. ಸಂತೋಷ... ಪ್ರತಿಕ್ರಿಯೆಗೆ ಸ್ವಾಗತ
    @Guru: Idu bari kottige kathe alla... Gouri namma nimma naduvenu irthaale... Nodkandu nadeeri hushaaru

    ReplyDelete
  4. Nice :)
    parakaaya pravesha maadi chennagi bhavanege belakannu kottiddira.

    ReplyDelete
  5. :)
    Parakaaya pravesha inno tilidilla nange..
    Hasugalu swalpa manassige hattiradavu.

    ReplyDelete
  6. different agide.. ishta aytu.. nanna blogigomme banni

    ReplyDelete
  7. This comment has been removed by the author.

    ReplyDelete
  8. chenagide...ede rithi baritha eru...

    ReplyDelete
  9. Thank you. Nimma abhimaanave namma spoorthi...

    ReplyDelete
  10. ನೀವು ಈ ಕಥೆ ಮೂಲಕ ನನ್ನನ್ನು ನಮ್ಮ ಊರಿಗೆ ಕರೆದುಕೊಂಡು ಹೋಗಿದ್ದೀರಿ. ನಿಮ್ಮ ಪ್ರಯತ್ನವನ್ನು ಹೋಗಳಲೇಬೇಕು. ನನ್ನ ಚಿಕ್ಕ ವಿನಂತಿಯೆಂದರೆ, ಅಂಗ್ಲ ಪದಗಳನ್ನು ತುರುಕಿ ಅಂದ ಕೆಡಿಸುವುದಕ್ಕಿಂತ ಕನ್ನಡದಲ್ಲೇ ರಸವಥಾಗಿ ಕಥೆ ಕಟ್ಟುವುದೇ ಒಳಿತು...

    ReplyDelete
  11. @Laxmikanta: ರಚನಾತ್ಮಕ ವಿಮರ್ಶಕರು ಸಿಗುವದು ಬಹಳ ಸಂತಸದ ಸಂಗತಿ.. ನಿಮ್ಮ ಸಲಹೆಗಳನ್ನು ಅಳವಡಿಸುವ ಪ್ರಯತ್ನ ಮಾಡುತ್ತೇನೆ.

    ReplyDelete