Monday 17 November 2014

ಬಾಲ್ಯ ಅಂದು -ಇಂದು


ನಾನಂದು ಓಡಿ ಹೋಗುತ್ತಿದ್ದುದು ಹಿಡಿಯಲು ballಲೇ
ಇಂದಿನ ಹುಡುಗರು ಓಡುವರು ನೋಡಲು ಬಾಲೆ

ಅಂದು ನನಗೆ ಮನೆಯ ಮುಂದೆ ಅಂಗಣ
ಇಂದಿನವರಿಗೆ ಮಂಗಳನೇ ಮುಂದಿನ ಅಂಗಣ

ನಾನೂ  ಓಡುತ್ತಿದ್ದೆ ಕುಣಿಯುತ್ತಿದ್ದೆ ಹಾರುತ್ತಿದ್ದೆ
ಇಂದಿನವರೂ ಓಡುತ್ತಿದ್ದೆ ಕುಣಿಯುವರು ಹಾರುವರು
ವ್ಯತ್ಯಾಸ ಒಂದೇ...
ನನಗಾಗ ಮೈಮನಗಳಿಗೆ ಸುಖ ಪ್ರವಾಸ
ಇವರಿಗೋ ಕೇವಲ ಕಣ್ಣುಗಳಿಗೆ ಆಯಾಸ

ಅಂದು ಬಿದ್ದರೆ ಬರಸೆಳೆಯುವಳು ಅಮ್ಮ
ಇಂದು ಎದ್ದರೆ ಹಿಡಿದೆಳೆಯುವಳು ಆಯಾ

ಅಂದಿನ ಪ್ರೀತಿ ಪಪ್ಪಿ ಮುತ್ತು ಅಪ್ಪುಗೆಯೊಳಗೆ
ಇಂದಿನ love like comment share ನೊಳಗೆ

ಆಗ ಮನೆತುಂಬ ಮಕ್ಕಳು ಮನದ ತುಂಬ ನಗು
ಈಗ ಮನೆಗೊಂದು ಮಗು, ಕಾಣೆಯಾಗಿದೆ ನಗು.

-ಶ್ರೀ


                                   ನಮ್ಮ ಕಾರ್ಯಕ್ಷೇತ್ರದಲ್ಲಿ  ಕಾವ್ಯಾನ್ವೇಷಣೆ ಸ್ಪರ್ಧೆಗೆ ಬರೆದಿದ್ದು. ಬಹಳ ದಿನಗಳ ನಂತರ ಕಾವ್ಯಾಸಕ್ತಿ ಮೂಡಿಸಿದ ಆಯೋಜಕರಿಗೆ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ

3 comments:

  1. ಬದಲಾವಣೆಗಳನ್ನು ಚೆನ್ನಾಗಿ ಬರೆದಿದ್ದೀರಿ

    ReplyDelete
    Replies
    1. ಧನ್ಯವಾದ .. :) ಇಲ್ಲಿರುವ ಕೆಲವೇ ಕೆಲವು ಬರಹಗಳನ್ನೂ ನೋಡಿ ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಳನ್ನು ನೀಡಿ :)

      Delete
  2. Awesome. Very nice poetic comparision

    ReplyDelete